ಸೋಮವಾರ, ಏಪ್ರಿಲ್ 6, 2015

ONDU ಸಾಲಿನ ಕಥೆಗಳು..!


* ಅಪಘಾತವಾಗದಂತೆ ತಡೆಯಲು ಮಾಡಿದ ಹಂಪಿನಿಂದಾಗಿ ನಾಲ್ಕು ಅಪಘಾತವಾಗಿತ್ತು..!!

            -----#------

* ಮಗನನ್ನು ಹೆತ್ತು, ಹೊತ್ತು, ಸಾಕಿ, ಸಲಹಿ, ಇಂಜಿನಿಯರ್ ಮಾಡಿದ್ದ ಆಕೆ, ವ್ರದ್ಧಾಶ್ರಮದಲ್ಲಿ ಸಮಾಧಿಯಾಗಿದ್ದಳು...!!

                 -----#------


* ಅವಳು, ತನಗೆ ಬೇಕಾಗಿದ್ದೆಲ್ಲವನ್ನು ಅವನಿಂದ ವತ್ತಾಯ ಮಾಡಿ ಪಡೆದಳು.., ಅವನಾಗಿಯೇ ಕೊಟ್ಟ ಪ್ರೀತಿಯನ್ನು ತಿರಸ್ಕರಿಸಿದಳು...!!

             -------#-------


* ಶ್ರೀಮಂತನ ಮನೆಯ ಊಟದಿಂದ ಅಜೀರ್ಣವಾಯಿತು., ಅದಕ್ಕೂ ಮೊದಲು, ದಾರಿಯಲ್ಲಿ ಸಿಕ್ಕ ಒಬ್ಬ ಬಡವನ ನಗುವಿನಿಂದ ಹೊಟ್ಟೆ ತುಂಬಿ ಹೋಗಿತ್ತು...!!

ಶನಿವಾರ, ಏಪ್ರಿಲ್ 4, 2015

ಯಾರದೋ ??



ನನ್ನ ಕಾಲುಗಳ ಮೇಲೆಯೇ
ನಾನು ನಿಂತಿದ್ದೇನೆ...
ಊರು ಯಾರದೋ !
ಸೂರು ಯಾರದೋ !!?


ನನ್ನ ಬಾಯಿಯಿಂದಲೇ
ನಾನು ಮಾತಾಡುತ್ತೇನೆ..
ಕಂಠ ಯಾರದೋ !
ಧ್ವನಿ ಯಾರದೋ !!?


ನನ್ನ ಕಣ್ಣಿಂದಲೇ
ನಾನು ಜಗತ್ತು ನೋಡುವುದು..
ದೃಷ್ಠಿ ಯಾರದೋ !
ಬೆಳಕು ಯಾರದೋ !!?


ನನ್ನ ಬದುಕಲ್ಲೇ
ನಾನು ಬದುಕಿದ್ದೇನೆ...
ಶಕ್ತಿ ಯಾರದೋ !
ಮುಕ್ತಿ ಯಾವುದೋ !??

ಗುರುವಾರ, ಏಪ್ರಿಲ್ 2, 2015

ಕಳ್ಕೊಂಡೆ ಎಲ್ಲಾನೂ...!!

ಕಳ್ಕೊಂಡೆ ಎಲ್ಲಾನೂ.,
ಅವಳ್ ನಗುವಿನಲ್ಲಿ...|
ತೊಳ್ಕೊಂಡೆ ಕೈಯ್ಯನ್ನು
ಕಣ್ಣೀರಿನಲ್ಲಿ...||


ಬರ್ಬಾದು ಆಗೋದೇ
ಕಂಡವ್ರೀಗ್ ಕೊಟ್ಟು..|
ಕೈನಾಗೆ ಏನೈತೆ
ಸಾಲವೊಂದ್ ಬಿಟ್ಟು ||


ಕಸ್ಟ್ ದಾಗೆ ಕೈ ಕೊಟ್ಟೆ
ನಿನ್ ಮನೆಯ ತೊಳಿಯಾ |
ದುಖ್ ದಾಗೂ ಜೊತೆಗಿದ್ದ
ಅವ್ನೇ ನನ್ ಗೆಳಿಯಾ..||


"ಯಾರ್ ಬೇಕಾರ್ ಹಾಳಾಗ್ಲಿ
ನಂಗಾಗೊದೇನು ??!!"
ಅನ್ಬೇಡಿ ಯಾವತ್ತೂ
ಇಂಥಾ ಮಾತನ್ನು ||


ನಮ್ಮಪ್ಪ ಹೇಳ್ತಿದ್ದ
ಲೈಫ್ ಇಷ್ಟೇ ಅಂತ..|
ಆ ಒಂದು ಅನುಭವವೇ
ಈಗ್ ನಂಗೆ ಸ್ವಂತ ||


ಬೇರೇವ್ರ ಕಷ್ಟಾನೇ
ನಿಮ್ದು ಅನ್ಕೊಳ್ಳಿ |
ಅವ್ರ್ಗೆಲ್ಲಾ ಹೆಲ್ಪ್ ಮಾಡಿ
ನೀವೂ ಉಳ್ಕೊಳ್ಳಿ ||


ರಾಘವೇಂದ್ರ ಹೆಗಡೆ

ಹೀಗೆ ಸುಮ್ಮನೆ....!!


ಒಂದು ಇಂಗ್ಲಿಷ್ ಕವಿತೆ :-
Once upon a time, I met a beaty girl...
She is as pretty as a Pearl.         She smiled at me and said, - "u are my friend..!"
but my inner heart beats dat,  "i m ur husband..!!".                   
she said, "can u drop me with ur pulser.?"..                             
I replied with pleasure, "oh..it is to me, like an offer..!".            
she said," can u recharge my new Airtel sim..!?".                     
I surprised nd said, "oh...due to u are pretty and slim...!".         


Finally..,                                    
One day, I strongly decides to proposing her with a flower..🌹     Then,  she touched me and suddenly said..


" Hw r u My Sweet  "BROTHER"...!!😭😭

ಎನ್ನ ಭಾವದ ಕಡಲು.....!!

ಎನ್ನ ಭಾವದ ಕಡಲು
ಉಕ್ಕುಕ್ಕಿ  ಹರಿದಾಗ
ಅಕ್ಷರದ ಅಲೆಯಾಯಿತು..!
ಆ ಅಲೆಯೇ ಹೃದಯದೊಳು
ಸಾಲಾಗಿ ಅಪ್ಪಳಿಸಿ,
ಕಾವ್ಯಗಳ ಸೆಲೆಯಾಯಿತು..!!


ಇದು ಬರಿಯ ಸೆಲೆಯಲ್ಲ.,
ಬಿಡಿಸಲಾಗದ ಸೆಳೆತ...
ಸುಳಿಯೊಳಗೆ ನಾ ಸಿಲುಕಿದೆ..!
ಹುಚ್ಚು ಹಿಡಿಸಿತು ಕವಿತೆ
ಗೀಳೇ ಆಯಿತು ಕೊನೆಗೆ.,
ಅಚ್ಚಳಿಯದೇ ಉಳಿದಿದೆ..!!


ಕವಿಯ ಭಾವದ ಲಹರಿ
ಬಣ್ಣ ಬಣ್ಣದ  ತೀರ್ಥ.,
ಕುಡಿದಷ್ಟೂ ಹಿತ ಅನುಭವ..!
ಮೀಯುತಲೇ ಇರಬೇಕು.,
ತೋಯುತಲೇ ಇರಬೇಕು.,
ಇದರಂಬುಧಿ ಸಾರವ....!!

ನಾ ಬಡವನಿರಬಹುದು...
ನನ್ನ ಗುಣವಲ್ಲ..!


ನಾ ದುಷ್ಟನಿರಬಹುದು..
ನನ್ನ ಅಮ್ಮನಲ್ಲ..!


ನಾ ಸಾಯಬಹುದು..
ನನ್ನ ಕವಿತೆಗಳಲ್ಲ....!!
ಶುಭ ರಾತ್ರಿ

ಬುಧವಾರ, ಏಪ್ರಿಲ್ 1, 2015

-: ಕನ್ನಡ ನುಡಿ :-


ಕನ್ನಡವನು ಅನವರತ ಧ್ಯಾನಿಸು
ದೇಹವೇ ದೇವಾಲಯ |
ಕನ್ನಡವನು ದಿನನಿತ್ಯ ಪ್ರೇಮಿಸು
ಹೃದಯವೇ ಪ್ರೇಮಾಲಯ ||


ನಡು ರಾತ್ರಿಯಲಿ ನುಡಿಯಲಿ ಕನ್ನಡ
ಅಲ್ಲೇ ಸೂರ್ಯೋದಯ
ಮನಸಿನ ಕತ್ತಲ ನಡುವಲಿ ಮಿಡಿದರೆ
ಅಲ್ಲೇ ಚಂದ್ರೋದಯ ||


ನೃತ್ಯ ಶಿಲ್ಪ ಕಲೆ, ಗಾನ ನಾಟ್ಯ ಸೆಲೆ
ವೈಭವ ನೂರಾರು |
ರಸ ಋಷಿಗಳ ವರ ತಪೋಬಲದ ನೆಲ
ಕವಿಗಳ ತವರೂರು ||


ಆಂಗ್ಲದ ಸೂಕ್ತಿಗೆ ಇಂಗಿದೆ ಬಾಯಿ
ಬಳಲುತ ಬಾಯಾರಿ |
ಬತ್ತಿದ ಹೃದಯಕೆ ತಂಪನೆರೆದಿದೆ
ಕನ್ನಡ ಕಾವೇರಿ ||


ಬಲ್ಲಿದ ನಾಡಲಿ ನಿಲ್ಲದೆ ಹರಿಯಲಿ
ಕನ್ನಡ ಅಮೃತವು |
ಎಲ್ಲರ ಎದೆಯನು ಗೆಲ್ಲುತ ಮೆರೆಯಲಿ
ಕನ್ನಡ ಶಾಶ್ವತವು ||


ಬಾಳಿನ ನವಸುಧೆ ಬತ್ತುವ ಮುನ್ನ
ಕನ್ನಡಕೆತ್ತಿರಿ ಕೈ |
ಜೀವದ ಹಣತೆಯು ಆರುವ ಮುನ್ನ
ನುಡಿಯಿರಿ ಕನ್ನಡ ಜೈ ||