ಬುಧವಾರ, ಏಪ್ರಿಲ್ 1, 2015

-: ಕನ್ನಡ ನುಡಿ :-


ಕನ್ನಡವನು ಅನವರತ ಧ್ಯಾನಿಸು
ದೇಹವೇ ದೇವಾಲಯ |
ಕನ್ನಡವನು ದಿನನಿತ್ಯ ಪ್ರೇಮಿಸು
ಹೃದಯವೇ ಪ್ರೇಮಾಲಯ ||


ನಡು ರಾತ್ರಿಯಲಿ ನುಡಿಯಲಿ ಕನ್ನಡ
ಅಲ್ಲೇ ಸೂರ್ಯೋದಯ
ಮನಸಿನ ಕತ್ತಲ ನಡುವಲಿ ಮಿಡಿದರೆ
ಅಲ್ಲೇ ಚಂದ್ರೋದಯ ||


ನೃತ್ಯ ಶಿಲ್ಪ ಕಲೆ, ಗಾನ ನಾಟ್ಯ ಸೆಲೆ
ವೈಭವ ನೂರಾರು |
ರಸ ಋಷಿಗಳ ವರ ತಪೋಬಲದ ನೆಲ
ಕವಿಗಳ ತವರೂರು ||


ಆಂಗ್ಲದ ಸೂಕ್ತಿಗೆ ಇಂಗಿದೆ ಬಾಯಿ
ಬಳಲುತ ಬಾಯಾರಿ |
ಬತ್ತಿದ ಹೃದಯಕೆ ತಂಪನೆರೆದಿದೆ
ಕನ್ನಡ ಕಾವೇರಿ ||


ಬಲ್ಲಿದ ನಾಡಲಿ ನಿಲ್ಲದೆ ಹರಿಯಲಿ
ಕನ್ನಡ ಅಮೃತವು |
ಎಲ್ಲರ ಎದೆಯನು ಗೆಲ್ಲುತ ಮೆರೆಯಲಿ
ಕನ್ನಡ ಶಾಶ್ವತವು ||


ಬಾಳಿನ ನವಸುಧೆ ಬತ್ತುವ ಮುನ್ನ
ಕನ್ನಡಕೆತ್ತಿರಿ ಕೈ |
ಜೀವದ ಹಣತೆಯು ಆರುವ ಮುನ್ನ
ನುಡಿಯಿರಿ ಕನ್ನಡ ಜೈ || 

2 ಕಾಮೆಂಟ್‌ಗಳು: